03 October, 2011

Love,

ಪ್ರೀತಿ ಅಂದ್ರೆ ಇದೇನೆ......,

ಅಂದು, ಅವಳು ಅವನನ್ನು ನೋಡಿ ಮೋಹಕ ನಗು ಬೀರಿದಾಗ, ಅವಳು ಧರಿಸಿದ್ದ ಕೆಂಪು ಕುತರ್ಾಕ್ಕೆ ಪಿಂಕ್ ಸ್ಕೊಟಿ ಅವಳ ಸೌಂದರ್ಯಕ್ಕೆ ಮೆರಗು ನೀಡುತ್ತಿತ್ತು. ಅವನ ಪ್ರೇಮದ ಮನವಿಗೆ ಅವಳ ಪರೀಕ್ಷೆಗಳನ್ನು ದಾಟಲೇಬೇಕು. ಅವನ ನಿಸ್ವಾರ್ಥ ಪ್ರೇಮದ ,ಅಚ್ಚಳಿಯದ ಪ್ರೀತಿ ತೋರುವಲ್ಲಿ, ಅವಳು ಮಾಡುವ ಪರೀಕ್ಷೆಗಳಲ್ಲಿ, ಅವನು ರ್ಯಾಂಕ್ ಗಿಟ್ಟಿಸಲೇಬೇಕು. ಪರೀಕ್ಷಗಳೆಂಬ ಅಗ್ನಿಕುಂಡಗಳನ್ನು ಹಾದು ತಾನೊಬ್ಬ ಯಶಸ್ವಿ ಪ್ರೇಮಿ ಎಂದು ತೋರುವ, ಅವನ ಧ್ಯೆರ್ಯ ಸಾಹಸಕ್ಕೆ ಮೆಚಿ,್ಚ ಅವಳು ಕಣ್ಣೋಟದಲ್ಲಿ ಗ್ರೀನ್ಸಿಗ್ನಲ್ ನೀಡುತ್ತಾಳೆ. ಅಷ್ಟೇ, ಅವಳ ಪ್ರೀತಿ-ಪ್ರೇಮಕ್ಕೆ ಕಾದಿದ್ದವನಿಗೆ ಅಮೃತಸಿಂಚನವಾದಂತೆ ಪ್ರೀತಿಯ ಸುರಿಮಳೆಯಾದಾಗ, ಅವನ ಕಣ್ಣು ಜೀವನದ ಬಗ್ಗೆ ಭಾಷೆ ನೀಡುತ್ತದೆ. ಅವಳ ತೋರುಬೆರಳಿಗೆ ಸಿಲುಕಿ ನತರ್ಿಸುವ, ಮುಂಗುರುಳು ನೊರೆಂಟು ಕನಸು ತೋರುತ್ತವೆ. ಆಗಸದ ಕಾಮನಬಿಲ್ಲು ಅವರಿಬ್ಬರ ಪ್ರೇಮ-ಸೇತುವೆಯಾಗುತ್ತದೆ. ಅದೇ, ಅಮೃತಘಳಿಗೆಯಲ್ಲಿ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಸುರಿವ ಜಲಧಾರೆಯ ನೀರಿನ ಹಾಗೆ, ಚುಂಬಿಸಲು ಹತ್ತಿರ ಬರುವ ಅವನು, ಕೆನ್ನೆ ಸೋಕಿದರೂ ಸೋಕದಂತೆ, ಮುತ್ತಿಟ್ಟದ್ದು ಪ್ರೇಮ ಎನ್ನುವುದು ಇದಕ್ಕೆ ಎಂದು ಜಗತ್ತಿಗೆ ಸಾರಿ ಹೇಳುವಂತಿತ್ತು. ಪ್ರೇಮಕ್ಕೆ ಕಣ್ಣಿದೆ ಎನ್ನುವುದು ಅವರೀರ್ವರ ಪ್ರಾಮಾಣಿಕ ಪ್ರೀತಿ ಕೊಗಿ, ಕೊಗಿ ಹೇಳುತ್ತಿತು. ಆಗಸದಲ್ಲಿ ದೇವತೆಗಳು ನಿಂತು ನೋಡುತಿದ್ದಾರೆನೋ ಎನ್ನುವಂತೆ ಆಕಾಶದಲ್ಲಿ ಕಾಮನಬಿಲ್ಲು ಇನ್ನಷು ವರ್ಣರಂಜಿತವಾಗಿ ಮೂಡುತ್ತಿತು.


- ಅಜಿತನಾಥ್ ಜ್ಯೆನ್, ಹರಪನಹಳ್ಳಿ

No comments:

Post a Comment