03 October, 2011

Mungaru MaLe

ಇದು ಬೇಕಿತ್ತಾ....,

ದಿನವಿಡೀ ಮುಸುಕಿದ ಕಪ್ಪು ಕಾಮರ್ೋಡ, ನಡುನಡುವೆ 'ಚುರ್' ಎನಿಸುವಷ್ಟೂ ಸೊರ್ಯನ ಬಿಸಿಲಿದ್ದರೊ, ಅರಿವಿಗೆ ಬಾರದಷ್ಟೊ ತಂಪನೆ ಹವಮಾನ. ದಿಡೀರನೆ ಸೊಯರ್ೆನೆಂಬೊ ಸೊರ್ಯನನ್ನು ನುಂಗಿ ಹಾಕಿ, ಕೊಡ ನೀರನ್ನೆ ತಾಸುಗಟ್ಟಲೆ, ಇಡೀ ಊರಿಗೆ ಜಿಟಿಜಿಟಿ ಹನಿಸುವ 'ಉತ್ತರೆ'ಯ ವ್ಯೆಯಾರದ ಮೋಡಿಯ ಮುಂದೆ ಬಿರುಬಿಸಿಲಿನ ಸೊರ್ಯ ತಣ್ಣಗಾಗಿದ್ದಾನೆ. ಬಿರುಬಿಸಿಲು ಇದ್ದಲ್ಲಿ ಜಗತ್ತನ್ನೆ ಗೆಲ್ಲುವ ಉತ್ತರ ಕನರ್ಾಟಕ ಉತ್ತರೆಯ ದಾಳಿಗೆ ಬಸವಳಿಯುತ್ತದೆ. ಒಂದೆಡೆ ರ್ಯೆತಾಪಿ ಜನರ ಸಂತಸ-ಸಂಕಟ ಉತ್ತರೆಗೊಂದು ಉತ್ತರವಾದರೆ, ಸಿಟಿಜನ'ರೆಂಬ ನಗರಗಳ ನಾಗರಿಕರ ಪಾಪದ ಅನಿಷ್ಟವನ್ನು ಎತ್ತಿ ತೋರಿಸಿ ಜನರಲ್ಲಿರುವ ಪರಿಸರದ ಬಗೆಗಿನ ಉತ್ತರನ ಪೌರುಷವನ್ನು ಎಲ್ಲರೆದರು ಡಂಗುರ ಸಾರುವ ಉತ್ತರೆ ನಮ್ಮ ಹೆಮ್ಮೆಯೇ ಸರಿ. ಛಟಿಲ್ ಎನ್ನುವ ಮಿಂಚು, ದಡಲ್'ಗುಟ್ಟುವ ಗುಡುಗು, ಈ ಎಲ್ಲವುಗಳ ನಡುವೆ ನಾಗರಿಕರ ಭ್ಯೆಗುಳ ಉತ್ತರೆಗೆ ಪ್ರೆಶ್ನೆಯಾಗೆ ಉಳಿದಿದೆ.
ಒಣಗಿದ್ದ ಕೆರೆಕಟ್ಟೆಗಳ ತುಂಬಿಸಿ ಕೋಡಿ ಹರಿಸಿ, ತಗ್ಗು ಪ್ರದೇಶದ ಜನರ ಮೇಲೆ ಕಿಂಚಿತ್ತೊ ಕಾಳಜಿ ಇಲ್ಲ. ಬೆಂಗಳೂರಿನ ರಾಜಧಾನಿಯ ಜನರಿಗೆ ಒಚಿದೇ ದಿನದಲ್ಲಿ ಕನರ್ಾಟಕದ ಐದುವರೆ ಕೋಟಿ ಜನರ ಕಷ್ಟಗಳ ದರ್ಶನ ಮಾಡಿಸಿ, ಸಕರ್ಾರಕ್ಕೆ ಪಾಠ ಹೇಳುವ ದೈರ್ಯ ಯಾರಿಗೂ ಇಲ್ಲ. ಮುಲಾಜಿಲ್ಲದೇ ನಿರ್ಸಗಕ್ಕೆ, ಪರಿಸರಕ್ಕೆ ಗೌರವ ನೀಡುವ ಭಾವನೆ ಇಲ್ಲದ ಅನಾಗರಿಕ 'ಸಿಟಿಜನ್'ರ ತೆಲೆ ಮೇಲೆ ಮೊಟಕಿ ಸರಿ ದಾರಿಗೆ ಬನ್ನಿ ಎಂದು ಹೇಳುವ ಉತ್ತರೆಗೆ ಮೆಚ್ಚುಗೆ ಸೊಚಿಸಬೇಕಾಗಿದೆ.
ಉತ್ತರೆಯ ಈ ಪಾಟಿ ಧೈರ್ಯ ಸಾಹಸ ಉಳಿದ ಮಳೆಗಳು ತೋರಿಸಿದರೆ ಏನಾಗಬಹುದು. ಈಗಾಗಲೇ 'ಹಸ್ತ'ದ ದಾಳಿ ಶುರುವಾಗಿದೆ, ' ಹಗಲು ಹಸ್ತ, ರಾತ್ರಿ ಚಿತ್ತ' ಎನ್ನುವೆಂತೆ ಹಗಲು-ರಾತ್ರಿ ಪಾಳಿಯ ಮೇಲೆ ಕುಂಭದ್ರೋಣ ಮಳೆ ಸುರಿಸಿ ಜನ, ದನ, ಮನೆ ನೀರು ಪಾಲಾಗುವ ಸುದ್ದಿ ಸಾಮಾನ್ಯವಾಗಿಸ ಹೋಗಿದೆ. ಮಳೆ,ಮಳೆ ಎಂದು ಪರಿತಪಿಸುತ್ತಿದ್ದ ನಮ್ಮ ಭಾಗದ ಜನ ಮಳೆ ಎಂದರೆ ಬೆಚ್ಚಿ ಬೀಳುವ ಪರಿಸ್ಥಿತಿ ಬಂದಿದೆ. ಎಲ್ಲಿವರೆಗೂ ನೆಡೆದರೊ ನೀರು, ನೀರು.., ಮ್ಯೆಲುಗಟ್ಟಲೇ ನೆಡೆದರೊ ಒಣ ನೆಲ ಎನ್ನುವುದು ಮರೀಚೀಕೆಯಾಗಿದೆ. ಬೆಳೆ ಕ್ಯೆಗೆ ಬಂತು ಎನ್ನುವಷ್ಟರಲ್ಲಿ ಮಳೆಯ ಆರ್ಭಟಕ್ಕೆ ರ್ಯೆತರ ಮುಖ ಕಪ್ಪಿಟ್ಟಿದೆ. ಊರಿನ ತಗ್ಗು ಪ್ರದೇಶಗಳಲ್ಲಿ ಎದೆಮಟ್ಟಕ್ಕೊ ನೀರು ಮೇಲೆರಿದೆ. ಮಳೆಗಾಲದ ಸಮಯ ದಾರಿ ತಪ್ಪಿದೆಯೇ? ಜನರಿಗೆ ಬುದ್ದಿ ಕಲಿಸಲು ' ವರುಣ ದೇವ'ನ ಮಾಸ್ತರ ಬುದ್ದಿ ಕೆಲಸ ಮಾಡುತ್ತಿರಬಹುದೇ?
ಓಟ್ಟಿನಲ್ಲಿ ಜನರ ಈ ಪರಿಸ್ಥಿತಿಗೆ ಅನೇಕ ಕಾರಣಗಳ ನಡುವೆ ಪ್ರಕೃತಿ ವಿಕೋಪ ನಿರ್ವಹಣಾ ತಂಡ ಆಸ್ತಿತ್ವಕ್ಕೆ ಬಾರದೇ ಇರುವದು, ಹಾಗೂ ಅದು ಇದ್ದರೊ ಸಹ ನಿರ್ವಹಣೆ ಮಾಡಲು ಅನುಭವ, ಸೌಕರ್ಯ, ಅದಕ್ಕೂ ಮಿಗಿಲಾಗಿ ನಿರ್ವಹಣಾ ತಂಡಕ್ಕೆ ಬೇಕಾದ ಇಚ್ಚಾಶಕ್ತಿ ಇಲ್ಲದೇ ಇರುವದೇ ಕಾರಣವಾಗಿದೆ. ಎಲ್ಲ ವಿಚಾರದಲ್ಲೂ ರಾಜಕೀಯ ಮಾಡುವ ರಾಜಕಾರಣಿಗಳು ಇಂತಹ ಪ್ರಕೃತಿ ವಿಕೋಪದ ಸಂಧರ್ಭದಲ್ಲೂ ರಾಜಕೀಯ ಮಾಡತ್ತಾ ಜನರನ್ನು ಒಚಿದು ತುತ್ತು ಕೊಳಿಗೆ ಪರದಾಡುವಚಿತೆ ಮಾಡತ್ತಿರುವುದು ದುರಂತವೆ ಸರಿ.
ಮಂದೆ ಬರಲಿರುವ ಚಿತ್ತ, ಸ್ವಾತಿ'ಯರ ಮೌನ ಏನೆಂದು ಹೇಳಬಹುದು. ಮಳೆಗಾಲದ ಕಥೆ ಮುಗಿಸುವ ಸ್ವಾತಿ ಮಳೆಗಾಲದ ಕೊನೆಗೆ ಯಾವ ಪಾಠ ಹೇಳಬಹುದು. ನಿಸರ್ಗದ ಪ್ರತಿಯೊಂದು ನೆಡೆಯೂ ನಮಗೆ ಪಾಠ ಹೇಳುತ್ತಲೆ ಬಂದಿವೆ. ನಿಸರ್ಗದ ಮಾತಿಗೆ ಕಿವಿಗೊಡುವ ಬುದ್ದಿಯನ್ನು ಇನ್ನಾದರೂ ನಮಗೆ ಬರಲಿ.

- ಅಜಿತನಾಥ್ ಜ್ಯೆನ್, ಹರಪನಹಳ್ಳಿ.

No comments:

Post a Comment