03 October, 2011

teachers of pu collages of karnataka

ಎಲ್ಲಿದ್ದಾರೆ ಶಿಕ್ಷಕರು ?
 ವೃತ್ತಿ ಕೌಶಲ್ಯ ಕಲಿಕೆಯ ಅವಶ್ಯಕತೆ ವಿದ್ಯಾಥರ್ಿಗಳಿಗೆ ಬೇಕಾದ ಈ ಸಮಯದಲ್ಲಿ ಶಿಕ್ಷಕ ವೃತ್ತಿ ಆಯ್ಕೆಯಾಗಿರಲಿ, ಅವಶ್ಯಕತೆಯಾಗಿರಲಿ ಕಾಲಕ್ಕೆ ತಕ್ಕಂತೆ ತಾವು ಕಲಿತು ತಮ್ಮ ಶಿಷ್ಯ ವರ್ಗಕ್ಕೂ ಕಲಿಸಬೇಕಾದ ಶಿಕ್ಷಕರ ಇದ್ದಾರೆಯೇ ಎಂಬುದನ್ನ ನಾವು ಗಮನಿಸಬೇಕಾಗಿದೆ. ಕೆಲಸವೇ ಮುಖ್ಯ, ಎನ್ನುವುದಕ್ಕಿಂತ, ಕೆಲಸಕ್ಕೆ ಕೊಡುವ ಸಂಬಳ, ಉಳಿದ ಸಮಯದಲ್ಲಿ ಇತರೆ ಬಿಸಿನೆಸ್ಗಳು ಜೋರು, ಜೋರು. ಸಕರ್ಾರಿ ಕಾಲೇಜ್ಗಳನ್ನು ಬಿಡಿ, ಖಾಸಗಿ ಕಾಲೇಜ್ಗಳಲ್ಲಿ ಎಂ.ಫಿಲ್ ಪದವಿ ಪಡೆದ/ಪಡೆಯಲಿರುವ ಕನ್ನಡ ಉಪನ್ಯಾಸಕರಿಗೆ ತಮ್ಮದೇ ಕಾಲೇಜಿನಲ್ಲಿರುವ ಕನ್ನಡ ಹಾಗೂ ಸ್ಯಾಹಿತ್ಯೇತೆರ ವಿಷಯಗಳ ಕೃತಿ ಓದುವ ಹವ್ಯಾಸವಿದೇಯೆ? ಪೂರಕ ಕೃತಿಗಳನ್ನು ಕೊಂಡುಕೊಳ್ಳದೇ, ಯಾವುದೇ ಹೆಚ್ಚಿನ ವಿಚಾರಗಳಿಲ್ಲದೇ, ಪಾಠ ಮಾಡುವವರು ಇರುವಾಗ ಶಿಕ್ಷಕ ವೃತ್ತಿ ಅನಿವಾರ್ಯವೇ ಇವರಿಗೆ?
ಇಂದಿಗೂ ಅನೇಕ ಜನ ಕನ್ನಡ ಉಪನ್ಯಾಸಕರು ಕುವೆಂಪು ವಿರಚಿತ 'ಶ್ರೀರಾಮಾಯಣದರ್ಶನಂ' ಬೇಡ, ಅವರ 'ಮಲೆಗಳಲ್ಲಿ ಮದುಮಗಳು' ಕೃತಿ ಓದಿದ್ದಾರೆಯೇ? ಕೇಳಿ ನೋಡಿ. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳದ ಇವರು ತಮ್ಮ ವಿಧ್ಯಾಥರ್ಿಗಳಿಗೆ ಉಪನ್ಯಾಸಗಳ ನಡುವೆ ಪಠ್ಯಕ್ಕೆ ಪೂರಕವಾದ ವಿಷಯಗಳ ಕವಿ, ಕೃತಿಗಳ ಉಲ್ಲೇಖ ಮಾಡುವುದು. ಪಠ್ಯಪುಸ್ತಕಗಳಲ್ಲಿ ಸಿಗಲಾರದ, ಪತ್ರಿಕೆಗಳಲ್ಲಿ, ಲೇಖನಗಳಲ್ಲಿ, ಕೃತಿಗಳಲ್ಲಿ ಹೇರಳವಾಗಿ ಸಿಗುವ ಅಂಶಗಳನ್ನು, ವರ್ಣನೆಗಳನ್ನು, ವಿಚಾರಗಳನ್ನು ಹೇಳಲು ಸಾಧ್ಯವಾಗುವುದಾದರೂ ಹೇಗೆ?
' ಕೆಲಸವನ್ನು ನಿಷ್ಟೆಯಿಂದ ಮಾಡಿ, ಲಾಭವನ್ನು ನಿರೀಕ್ಷಿಸದಿರಿ' ಎಂಬ ಮಾತಿಗೆ ಒಪ್ಪುವುದಾದರೆ, ಪೂರಕ ಆಧ್ಯಯನ ಮಾಡದೆ, ವಿಧ್ಯಾಥರ್ಿಗಳಿಗೆ, ಭೋದಿಸುವ ಭೋಧನಾ ವೃತ್ತಿಗೆ ಇವರು ಯಾವ ನಿಷ್ಟೆಯಿಂದ ಇರುತ್ತಾರೆ. ಅವರು ಕೊಡುವ ಸಂಬಳಕ್ಕೆ, ಅಷ್ಟೆಲ್ಲ ಯಾರು ಕೆಲಸ ಮಾಡಬೇಕು ಎನ್ನುವ ಉಪನ್ಯಾಸಕ ಪ್ರಕಾಶ್ (ಹೆಸರುಗಳನ್ನು ಬದಲಿಸಲಾಗಿದೆ) ತನ್ನ 'ಕನ್ನಡ ಉಪನ್ಯಾಸಕ' ಎಂಬ ಹೆಸರಿಗೆ ಏನು ಗೌರವ ಕೊಟ್ಟಂತಾಯಿತು. ಪ್ರಯತ್ಯವಿಲ್ಲದೇ ಫಲ ಸಿಗುತ್ತದೆಯೇ.
ಅತ್ತ ಕಾಲೇಜು, ಇತ್ತ ವ್ಯವಸಾಯ, ವ್ಯಾಪಾರ ಮಾಡುವ ಭೋಧಕರಿದ್ದಾರೆ. ವರ್ಷವಿಡೀ ಗಮನ ಬಯಸುವ ಇವು ಭೋಧಕರಿಗೆ ಭೋಧನಾ ಪೂರ್ವ ಆಧ್ಯಯನ ಮಾಡಲು, ಸಮಯಾವಕಾಶ ಸಿಗುತ್ತದೆಯೇ?
ಪ್ರತéಿಷ್ಟಿತ ಕಾಲೇಜಿನಲ್ಲಿರುವ ಮತ್ತ್ತೋರ್ವ ಉಪನ್ಯಾಸಕ ಮಿತ್ರ ತಮ್ಮದೇ ಕಾಲೇಜಿನಲ್ಲಿರುವ ವ್ಯವಸ್ಥಿತ ಗ್ರಂಥಾಲಯದಲ್ಲಿ ಪೂರಕ ಅಂಶಗಳಿಗೆ ಒಮ್ಮೆಯೂ ಹುಡುಕಿಲ್ಲವೆಂದರೆ, ಅಂತಹ ಗ್ರಂಥಾಲಯ ಇರುವುದು ವ್ಯರ್ಥ. ಇನ್ನೂ ವಿದ್ಯಾಥರ್ಿಗಳು ಎಷ್ಟರಮಟ್ಟಿಗೆ ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳುವರು. ಕೇವಲ ಪಠ್ಯದ ಹಿಂದೆ ಬಿದ್ದಿರುವ ಕನ್ನಡ ಉಪನ್ಯಾಸಕರು, ಅಂಕದ ಬೆನ್ನು ಹತ್ತಿರುವ ವಿಧ್ಯಾಥರ್ಿಗಳಿಗೆ ಪೂರಕ ಅಧ್ಯಯನ ಉಪಯುಕ್ತವಾದುದು ಎಂಬುದನ್ನು ತೋರಿಸಿಕೊಡುವವರು ಯಾರು?
ಪ್ರತಿಯೊಂದಕ್ಕೂ ಲಾಭ ನಿರೀಕ್ಷಿಸುವ ಇಂದಿನ ಕಾಲದಲ್ಲಿ ಹೆಚ್ಚಿನ ಸಂಬಳವಿದ್ದರೂ ಸಹ, ಗ್ರಂಥಾಲಯದಲ್ಲಿನ ಸಾಹಿತ್ಯ ಕೃತಿಗಳ ಆಧ್ಯಯನ, ಅದರಲ್ಲಿನ ಸತ್ವ, ವಿಚಾರ ,ವಿವರ ಎಲ್ಲವನ್ನು ಸಂಗ್ರಹಿಸಿ, ಭೋಧನೆ ಮಾಡುವಾಗ ಬಳಸಿಕೊಳ್ಳುತ್ತಾರೆಯೆ? ಐದು ವರ್ಷಗಳಿಂದ ಅರೆಕಾಲಿಕನಾಗಿರುವ ಭೋಧಕನಿಗೆ ಭಾಷಣ ಬರೆದುಕೊಡಲು ಬರುವುದಿಲ್ಲವೆಂದರೆ, ಅವರು ತಮ್ಮ ಸವರ್ಿಸ್ನಲ್ಲಿ ಏನು ಕಲಿತಿದ್ದಾರೆ? ಎಂಬುದು ಯಕ್ಷಪ್ರಶ್ನೆಯಾಗುತ್ತದೆ.
ಕೆಲ ವಿಷಯಗಳಲ್ಲಿ ಅತಿ ವಿರಳವಾಗಿ ಸಿಗುವ ಉಪನ್ಯಾಸಕರು, ಮಾಡುವ ಕೆಲಸಕ್ಕೆ ಅಲ್ಲದಿದ್ದರೂ, ಕೊಡುವ ಸಂಬಳಕ್ಕೆ ಗೌರವ ನೀಡಲಾದರೂ ಅಧ್ಯಯನ ಮಾಡಲು ಸಿದ್ಧರಿಲ್ಲ. ಕಾಲೇಜಿನ ಉಪನ್ಯಾಸಕರ ಸ್ಥಿತಿ ಹೀಗಿರುವಾಗ ಹೊಲ, ಮನೆಗಳಲ್ಲಿ, ಹೋಟೆಲ್ಗಳು, ಅಂಗಡಿಗಳಲ್ಲಿ ಕೆಲಸ ಮಾಡಿ, ಪರಿಶ್ರಮದಿಂದ ಓದುವ ವಿದ್ಯಾಥರ್ಿಗಳು ಫಸ್ಟ್ಕ್ಲಾಸ್, ರ್ಯಾಂಕ್ ಬಂದರೆ, ಅವೆಲ್ಲ ಬಂದದ್ದು ತಮ್ಮಿಂದಲೇ ಎಂದು ಓದದ, ಬರೆಯದ, ಆದರೆ, ತಮ್ಮ ಬೆನ್ನು ತಟ್ಟಿಕೊಳ್ಳುವ ಉಪನ್ಯಾಸಕ ಮಹಾನುಭಾವರ ಸಂಖ್ಯೆ ಎಷ್ಟಿದೆ? ಕಾಲೇಜಿನಲ್ಲಿ ಪಾಠ ಮಾಡದ ಲೆಕ್ಚರರ್, ಟ್ಯೂಷನ್ನಲ್ಲಿ ಏನು ಪಾಠ ಮಾಡಬಹುದು. ಬೌಧ್ಧಿಕವಾಗಿ ಬೆಳೆಯಲಾರದ ಕನ್ನಡ ಉಪನ್ಯಾಸಕರು ಬಿಎಂಶ್ರೀ, ತೀನಂಶ್ರೀ, ಕುವೆಂಪು, ಮಟ್ಟಕ್ಕೇರದಿದ್ದರೂ, ಕಾಲು ಭಾಗಕ್ಕಾದರೂ ಬರಬಹುದಲ್ಲವೇ.
ಆದರೆ, ಇಂದಿನ ನಮ್ಮ ಕನ್ನಡ ಉಪನ್ಯಾಸಕ ಮಿತ್ರರಿಗೆ ಅಧ್ಯಯನವೆಂದರೆ ಅಲಜರ್ಿ. ವಿಧ್ಯಾಥರ್ಿಗಳಿಗೆ ವಿದ್ಯೆಯೇ ನಾಸ್ತಿ. ಹಿಂದಿನ ಮೇಷ್ಟ್ರುಗಳಿಗೆ ಸಿಗುತ್ತಿದ್ದ ಗೌರವ ಇಂದಿನ ಭೋಧಕರಿಗೆ ಯಾಕೆ ಸಿಗುತ್ತಿಲ್ಲವೆಂದರೆ, ಇಂದಿನ ಭೋಧನಾವರ್ಗಕ್ಕೆ ಅದ್ಯಯನವೇ ನಾಸ್ತಿ. ಇಂದಿನ ಯುವ ಜನರಿಗೆ ವೃತ್ತಿ ಒಂದು ಅವಶ್ಯಕತೆ ಅನಿವಾರ್ಯ ಆಗುತ್ತಿದೆಯೇ, ಹೊರತು ಇಚ್ಚೆ ಪಟ್ಟು ಬರುವವರ ಸಂಖ್ಯೆ ಕ್ಷೀಣಿಸುತ್ತಿದೆ, ಎಂಬುದು ಮಾತ್ರ ದುರಂತ.

_ ಅಜಿತನಾಥ ಜೈನ್. ಹರಪನಹಳ್ಳಿ

No comments:

Post a Comment