03 October, 2011

jainsm


ಸದ್ಧರ್ಮವೃದ್ದಿರಸ್ಸು


ಅದೊಂದು ದಿನ ಅರಣ್ಯದಲ್ಲಿ ಪುರೂರವನೆಂಬ ಬೇಡ ಆಹಾರಕ್ಕಾಗಿ ಸುತ್ತಾಡುತ್ತಿದ್ದಾಗ, ದೂರದಲ್ಲಿ ಮೃಗವೊಂದು ಕಂಡು ಬಾಣ ಬಿಡಲು ಸಿದ್ಧನಾದ ಆಗ, ಪುರೂರವನ ಪತ್ನಿ ತಡೆದು ಅಯ್ಯೋ ! ಅದು ಮೃಗವಲ್ಲ, ಯಾರೋ ಋಷಿಗಳು ತಪಸ್ಸು ಮಾಡುತ್ತಿದ್ದಾರೆ ಎಂದಳು. ಆಗ ಪುರೂರವ ಪತ್ನಿ ಸಮೇತ, ಮುನಿಗಳ ಹತ್ತಿರ ಹೋದ, ಮುನಿಗಳ ಸದ್ಧರ್ಮವೃದ್ದಿರಸ್ಸು ಎಂಬ ಆಶರ್ೀವಾದದ ನುಡಿಗೆ ಮಾರು ಹೋಗಿ, ಮಧ್ಯ, ಮಾಂಸದ ತ್ಯಾಗವೃತವನ್ನು ತೆಗೆದುಕೊಂಡ.
ಮುಂದಿನ ಜನ್ಮದಲ್ಲಿ ಪ್ರಥಮ ತೀರ್ಥಂಕರ ಋಷಭನಾಥರ ಪುತ್ರ ಭರತ ಚಕ್ರವತರ್ಿಗೆ ಮರೀಚಿ ಎಂಬ ಪುತ್ರನಾಗಿ ಜನಿಸಿದ. ಮುಂದೆ ಮರೀಚಿ ಮುನಿಯಾಗಿ ದೀಕ್ಷೆ ಸ್ವೀಕರಿಸಿದ. ಕಾಲಾಂತರದಲ್ಲಿ ಸರ್ವಜ್ಙರೆನಿಸಿಕೊಂಡ ಆದಿತೀರ್ಥಂಕರ ಋಷಭನಾಥರು ಮರೀಚಿ ಮುನಿಯನ್ನು ಕರೆದು, ನೀನು ಈ ಕಾಲದ ಕೊನೆಯ ತೀರ್ಥಂಕರನಾಗುವ ಭಾಗ್ಯಶಾಲಿ.., ಋಷಭನಾಥರ ಮಾತು ಮುಗಿದಿರಲಿಲ್ಲ, ಮರೀಚಿ ಮುನಿ ಹರ್ಷದಿಂದ ಹೇಳಿದ ನನ್ನ ಅಜ್ಜ ಆದಿ ತೀರ್ಥಂಕರ, ನಾನು ಅಂತಿಮ ತೀರ್ಥಂಕರ ಮುಂದೆ ಯಾರ ಮಾತು ಕಿವಿಗೆ ಬೀಳಲಿಲ್ಲ.
ಮುಂದೆ ತನ್ನ ಅಜ್ಜನ ಹಾದಿಯಲ್ಲಿ ಸಾಗಿದರೂ ತಪಸ್ಸಿನ ಕಠಿಣತೆಯನ್ನು ದಾಟಲಾಗದೇ ಸೋತು ಹೋದ, ಅಹಿಂಸಾ ಮಾರ್ಗವನ್ನು ತ್ಯಜಿಸಿದ್ದರಿಂದ, ಮನುಷ್ಯ, ದೇವ, ನರಕ, ಪ್ರಾಣಿ ಜೀವನದ ಭವಗಳಲ್ಲಿ ಸಾಗುತ್ತಾ, ಕೊನೆಗೆ ಹಿಮವತ್ಪರ್ವತದ ತಪ್ಪಲಿನಲ್ಲಿ ಸಿಂಹವಾಗಿ ಜನಿಸಿದ. ಅಲ್ಲಿ ಅವಧಿಜ್ಞಾನ ಹೊಂದಿದ ಮುನಿಗಳು 'ಸಿಂಹ'ಕ್ಕೆ ಭವಾವಳಿಗಳ ನೆನಪಿಸಿ, ಧಮರ್ೋಪದೇಶ ಮಾಡಿದರು. ಆಗ ಸಿಂಹಕ್ಕೆ ಹಿಂದಿನ ಸ್ಮರಣೆಯುಂಟಾಗಿ ನಿರಾಹಾರಿಯಾಗಿ ಸಮಾಧಿಮರಣ ಹೊಂದಿ, ಮುಂದಿನ ಹತ್ತನೇ ಜನ್ಮದಲ್ಲಿ ಇಪ್ಪತ್ನಾಲ್ಕನೇ ತೀರ್ಥಂಕರ 'ಮಹಾವೀರ'ನಾಗಿ ಜನಿಸಿದ.

ಕೇವಲ ಒಂದೇ ಒಂದು ಜನ್ಮದಲ್ಲಿ ಹಿಂಸಾಪಥಕ್ಕೆ ಇಳಿದಿದ್ದರಿಂದ ಮರೀಚಿ ನೂರಾರು ಜನ್ಮಗಳಲ್ಲಿ ಕಷ್ಟಪಡಬೇಕಾಯಿತು. ಹಿಂಸೆ, ಎಂದರೆ ಕೇವಲ ಪ್ರಾಣಿಗಳ ಮಾರಣಹೋಮ ಮಾಡುವುದಲ್ಲ. ಬದಲಾಗಿ ಅದು ವಿಶಾಲಾರ್ಥವನ್ನು ಪಡೆದುಕೊಂಡಿದೆ. ಮಾನವನಲ್ಲಿ ಮೋಹ, ಮತ್ಸರ, ಆಸೆ, ಆಮಿಷಗಳನ್ನು ಹುಟ್ಟು ಹಾಕುವುದು ಕೂಡ ಹಿಂಸೆಯೇ ಆಗಿದೆ. ಇರುವೆಯಂತಹ ಪ್ರತಿಯೊಂದು ಜೀವಿಯಲ್ಲಿಯೂ ಆತ್ಮವಿರುವುದರಿಂದ ಪ್ರತಿಯೊಂದು ಜೀವಿಗೂ ತಮ್ಮ ಜೀವವೇ ಪ್ರಿಯವಾಗಿರುತ್ತದೆ. ಎಲ್ಲಾ ಜೀವಿಗಳು ಜೀವಿಸಲು ಇಚ್ಚಿಸುತ್ತವೆ, ಯಾರು ಸಾವನ್ನಪ್ಪಲು ಇಷ್ಟಪಡುವುದಿಲ್ಲ. ಆದ್ದರಿಂದಲೇ ಪ್ರಾಣಿವಧೆ ಘೋರ ಪಾಪವಾಗಿದೆ. ಹಿಂಸೆಯೇ ಪಾಪ, ಅಹಿಂಸೆಯೇ ಪುಣ್ಯ, ಅಹಿಂಸೆಯೇ ದಯೆಯ ತಾಯಿ, ದಯವೇ ಧರ್ಮದ ಮೂಲ ಅಹಿಂಸೆಗಿಂತ ಉತ್ಕರ್ಷ ಧರ್ಮ ಬೇರೊಂದಿಲ್ಲ.
ಅಹಿಂಸಾ ತತ್ವವನ್ನು ಕ್ರಮಬದ್ಧವಾಗಿ ವಿವರಿಸಿ, ಅದರಂತೆ ಸಂಪೂರ್ಣವಾಗಿ ಆಚರಣೆಯಲ್ಲಿ ತಂದೆ ಶ್ರೇಯಸ್ಸು ಜೈನಧರ್ಮಕ್ಕಿದೆ. ಈ ಅಹಿಂಸಾವಾದದ ಪರಿಣಾಮ ಭಾರತೀಯ ಧರ್ಮಗಳ ಮೇಲೆಲ್ಲ ಆದುದು ಕಾಣಬರುತ್ತದೆ.
ಕೂರ್ರತೆಯನ್ನು ಬಿಡುವುದೇ ಶ್ರೇಷ್ಟಧರ್ಮ, ಕಂಡ ಕಂಡ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ, ಎಲ್ಲಾ ಪ್ರಾಣಿಗಳನ್ನು ಹಿಂಸಿಸದಿರುವುದು ಎಲ್ಲಾ ಧರ್ಮಗಳಲ್ಲಿ ಶ್ರೇಷ್ಠವಾಗಿದೆ. ಎಂಬ ಉಲ್ಲೇಖ ಮಹಾಭಾರತದಲ್ಲಿ ಕಾಣಿಸುತ್ತದೆ. ಕ್ರಿ.ಶ. 12ನೇ ಶತಮಾನದಲ್ಲಿ ಬಸವಣ್ಣನವರು ಸಹ ದಯವಿಲ್ಲದ ಧರ್ಮವದೇವದಯ್ಯ ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ ಎನ್ನುವ ಮಾತು ಕ್ರಿ.ಶ. ಪೂರ್ವದಲ್ಲ್ಲಿ ಮಹಾವೀರರು ಹೇಳಿದ್ದ ಮಾತನ್ನು ಮತ್ತೇ ಪುನರುಚ್ಚರಿಸುತ್ತದೆ ಬಸವಣ್ಣನವರ ಈ ವಚನ.
ಹೀಗೆ ಪ್ರಾಚೀನ ಕಾಲದಿಂದಲೂ ಜೈನಧರ್ಮವು ಪ್ರತಿಪಾದಿಸುತ್ತಾ ಬಂದ ಅಹಿಂಸೆಯನ್ನು ಕುರಿತು ಮಹಾತ್ಮ ಗಾಂಧಿಜೀಯವರು ನಾವು ಸತ್ಯದಲ್ಲಿ ಏಕರೂಪರಾಗಲಿಕ್ಕೆ ಅಹಿಂಸೆಯೊಂದೇ ಸಾಧನವಾಗಿದೆ. ವಿಶ್ವದ ಶಾಂತಿ-ಸಮಾಧಾನ ಅಹಿಂಸೆಯಿಂದಲೇ ಸಾಧ್ಯ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಯತ್ನಿಸಿ, ಯಶಸ್ವಿಯಾದುದು ಕೂಡ ಅಹಿಂಸಾ ಪ್ರಯೋಗದಿಂದಲೇ.
ಯಹೂದಿಗಳೂ ಹೇಳುವಂತೆ ಯಾವುದು ತನಗೆ ಅಪ್ರ್ರಿಯವಾಗಿರುವುದೊ, ಅದನ್ನು ನೆರೆಯವರ ಮೇಲೆ ಪ್ರಯೋಗಿಸಬೇಡ. ಅರಬ್ಬರಲ್ಲಿನ ನುಡಿಗಟ್ಟೊಂದು ನಿನ್ನೊಡನೆ ಅನ್ಯರು ಹೇಗೆ ನಡೆದುಕೊಳ್ಳಬಾರದೆಂದು ಬಯಸುವೆಯೋ, ಅಂಥ ನಡತೆಯನ್ನು ನೀನು ಅನ್ಯರೊಡನೇ ಇಡಬೇಡ ಎಂಬುದಾಗಿದೆ. ಇಲ್ಲಿ ಪ್ರಿಯವಾಗಿರುವುದು ಅಹಿಂಸೆಯೇ.
ಎಲ್ಲ ಪ್ರಾಣಿಗಳು ತನ್ನಂತೆ ಎಂದು ಕಾಣಿಸುವುದು ಕೂಡ ಅಹಿಂಸಾ ಮಾರ್ಗವಾಗಿದೆ. ಆದರೆ, ಇಂದು ಎಲ್ಲೆಂದರಲ್ಲಿ ಸಿಡಿಯುವ ಸ್ಪೋಟಕಗಳ ಪ್ರತಿದ್ವನಿ ಕೇಳುತ್ತಿದ್ದರೆ, ಪ್ರಾಣಿಗಳ ರಕ್ಷಣೆ, ಅವುಗಳ ಜೊತೆ ಅನುಕಂಪ ಸಂಯಮದಿಂದ ವತರ್ಿಸುವುದನ್ನು ಹೇಳುವುದರ ಜೊತೆ ಜೊತೆಗೆ ಮಾನವನ ಹೆಸರನ್ನು ಸೇರಿಸಬೇಕಾಗಿದೆ. ಯಾಕೆಂದರೆ ದುಃಖ, ನೋವು, ಸಾವು, ನಿನಗೆ ಬೇಡಾದಂತೆ ಜಗದ ಮಾನವ ಪ್ರಾಣಿಯೂ ಸೇರಿದಂತೆ, ಯಾವ ಜೀವಿಗೂ ಬೇಡವಾಗಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಧರ್ಮದಿಂದ ವಿಮುಖರಾದವರು ನಿಷ್ಕಾರುಣವಾಗಿ ಎಲ್ಲವನ್ನು ಹಿಂಸಿಸುತ್ತಾರೆ. ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವವನು ಧರ್ಮವನ್ನೇ ಕೊಲೆ ಮಾಡುತ್ತಾನೆ. ದೇವರುಗಳ ಹೆಸರಿನಲ್ಲಿ ಬಲಿಯಾಗುವ ಕುರಿ, ಕೋಳಿ, ಮೇಕೆ ಎಲ್ಲವೂ ಬಲಿಯಾಗುವುದು ದೇವರ ಹೆಸರಿನಲ್ಲಿಯೇ ಹೊರತು, ದೇವರಿಂದಂತೂ ಅಲ್ಲ, ತಾಯಿಯ ಮಮತೆಯಂತೆ, ಅಹಿಂಸೆಯು ಸಕಲ ಜೀವಿಗಳಿಗೂ ಹಿತಕರವಾಗಿದೆ.
ಸಕಲ ಜೀವಿಗಳ ನಡುವೆ ಮಮತೆಯಿಂದ ಇದ್ದು ಅವುಗಳಿಗೆ ರಕ್ಷಣೆ ನೀಡಿದರೆ, ಬೇರೆ ಯಾವ ದಾನದ ಅವಶ್ಯಕತೆಯೂ ಇಲ್ಲ. ದಯವೇ ಧರ್ಮದ ಮೂಲ, ಆದ್ದರಿಂದಲೇ ಜೈನಧರ್ಮವೆಂದರೆ ಬೇರೆನಲ್ಲ, ಮಹಾವೀರರ ಪ್ರಮುಖ ಭೋದನೆಯ ಅದೇ, ಅಹಿಂಸೆ, ಅಹಿಂಸಾ ಪರಮೋಧರ್ಮಃ ಅಂದರೆ ಅಹಿಂಸೆ ಪರಮ ಶ್ರೇಷ್ಟವಾದ ಧರ್ಮ.


- ಅಜಿತನಾಥ ಜೆ, ಹರಪನಹಳ್ಳಿ

No comments:

Post a Comment