02 October, 2011

bhava pooje



ಭಾವಪೂಜೆ


ನಾವು ನಮ್ಮ ಮನಸ್ಸಿನ ನೆಮ್ಮದಿಗೆ, ಇಂದಿನ ಒತ್ತಡದ ಜೀವನದಲ್ಲಿ ಕೆಲ ಕ್ಷಣ ನಿಶ್ಚಿಂತೆಯಿಂದ ಕಳೆಯಲು ದೇವರ, ಸಂತರ ಮೊರೆಹೋಗುತ್ತೇವೆ, ಅಲ್ಲಿ ದೇವರಿಗೆ ಪೂಜೆ ಮಾಡಿಸಿ. ನಮ್ಮ ಜೀವನ ನೆಮ್ಮದಿಯಿಂದ ಇರಲು ಪ್ರಾಥರ್ಿಸುತ್ತೇವೆ. ಅಂದರೆ ಮನಸ್ಸಿನ ಶುದ್ಧಿಗಾಗಿ ನಮಗೆ ಒಂದು ಸಾಧನ ಬೇಕು, ಅದನ್ನೇ ನಾವು ಪೂಜೆಯೆಂದು ಕರೆಯುತ್ತೇವೆ. ಪೂಜೆಯಲ್ಲಿ ಎರಡು ವಿಧ.
ಮೊದಲನೇಯು 'ದ್ರವ್ಯ ಪೂಜೆ' ಜಲ, ಗಂಧ, ಅಕ್ಷತಾ, ಪುಷ್ಪ, ಧೂಪ ಮುಂತಾದ ದ್ರವ್ಯಗಳನ್ನು ಅಂದರೆ ವಸ್ತುಗಳನ್ನು ಉಪಯೋಗಿಸಿ ಪೂಜಿಸಲಾಗುತ್ತದೆ. ಒಳ್ಳೆಯ ಪರಿಣಾಮ, ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ದೇವರಿಗೆ, ನಾವು ಬೇರೆ ಬೇರೆ ವಸ್ತುಗಳನ್ನು ಅಪರ್ಿಸಿದ ಮಾತ್ರಕ್ಕೆ, ನಮಗೆ ಏನು ಫಲಸಿಗುವುದಿಲ್ಲ, ಕೆಲ ವಸ್ತುಗಳ ಅರ್ಪಣೆಯಿಂದ ಆ ದೇವರು ನಮಗೆ ಒಳ್ಳೆಯದನ್ನು ಮಾಡುತ್ತಾನೆ. ಎಂದು ಭಾವಿಸಿದರೆ ನಿಜಕ್ಕೂ ಅದು ನಮ್ಮ ಮೂರ್ಖತನವನ್ನು ಪ್ರದಶರ್ಿಸಿದಂತಾಗುತ್ತದೆ.
ಎರಡನೇಯದು ಭಾವ ಪೂಜೆ' ಯಾವುದೇ ವಸ್ತುಗಳಿಲ್ಲದೇ, ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಪೂಜಾ ವಿಧಾನವಿದು. ನಮ್ಮಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಲೋಭ, ಮುಂತಾದ ವಿಕಲ್ಪಗಳನ್ನು ನಾಶಪಡಿಸುವ ಪೂಜಾ ವಿಧಾನವಿದು. ಈ ಭಾವ ಪೂಜೆಯ ಬಗ್ಗೆ ಒಂದು ದೃಷ್ಟಾಂತ ಕತೆಯಿದೆ.
ಹೀಗೆ ಒಂದು ಊರಿನಲ್ಲಿ, ನಿಮ್ಮ ಊರಿನ ಹಾಗೆ, ಆ ಊರಿನ ದೇವಸ್ಥಾನದಲ್ಲಿ, ಒಬ್ಬ ಸನ್ಯಾಸಿ ಕುಳಿತ್ತಿದ್ದರು. ಅವರ ಬಳಿ ಹೋದ ಹಳ್ಳಿಗನೊಬ್ಬ ಕೇಳಿದ ಸನ್ಯಾಸಿಯನ್ನು, ಸ್ವಾಮಿ ದೇವರ ಪೂಜೆಗೆ ಪವಿತ್ರವಾದ ವಸ್ತು ಯಾವುದು ? ಎಂದು, ಸನ್ಯಾಸಿ ಹೇಳಿದರು ಹಾಲು ಪವಿತ್ರವಾದದ್ದು, ಹಳ್ಳಿಗ ಉತ್ತರಿಸಿದ ಹಾಲನ್ನು ಕರು ಕುಡಿದಿರುತ್ತಲ್ಲ, ಅಲ್ಲಿಗೆ ಅದು ಎಂಜಲಾಯಿತಲ್ಲ ಎಂದ, ಮತ್ತೇ ಸನ್ಯಾಸಿ ಹೇಳಿದರು ಹೂವಿನಿಂದ ಪೂಜೆ ಮಾಡು ಎಂದು, ಅದು ಹೇಗೆ ಸಾಧ್ಯ ಸ್ವಾಮಿ, ಹೂವಿನ ಮೇಲೆ ದುಂಬಿ ಕುಳಿತ್ತಿರುತ್ತಲ್ಲ ಎಂದ ಹಳ್ಳಿಗ, ಮತ್ತೇ ಸನ್ಯಾಸಿ ಹೇಳಿದ ಜಲದಿಂದ ಪೂಜೆ ಮಾಡು ಹಳ್ಳಿಗ ಉತ್ತರಿಸಿದ ನೀರಿನಲ್ಲಿ ಮೀನುಗಳು ಕಪ್ಪೆಗಳು ವಾಸಿಸುವದರಿಂದ ಅದು ಎಂಜಲಲ್ಲವೇ ಎಂದದ್ದನ್ನು ಕೇಳಿ, ಸನ್ಯಾಸಿ ಬೇಸರದ ಮನಸ್ಸಿನಿಂದ ಹೇಳಿದರು ಮನಸ್ಸಿನಿಂದ ಪೂಜೆ ಮಾಡು ಎಂದಾಗ, ಆ ಹಳ್ಳಿಗ ಹೇಳಿದ ಕಾಮ, ಕ್ರೋದ, ಲೋಭ, ಮೋಹ, ಮದ ಮತ್ತು ಮತ್ಸರಗಳಿಂದ ಮನಸ್ಸು ಒಂದು ತಿಪ್ಪೆರಾಶಿಯಾಗಿದೆ. ಅಂಥ ಕೊಳಕು ಮನಸ್ಸನ್ನು ಹೇಗೆ ದೇವರಿಗೆ ಅಪರ್ಿಸಲಿ ಎಂದ. ಆಗ ಸನ್ಯಾಸಿಗೆ ಜ್ಞಾನೋದಯವಾಯಿತು. 'ನನ್ನ ಮನಸ್ಸು ಪರಿಶುದ್ಧವಿಲ್ಲದೇ ಮಾಡುವ ಪೂಜೆ ವ್ಯರ್ಥ'ವೆಂದು.
ಹೊರಗಡೆ ಭಾರಿ ಶಕ್ತಿ ಪ್ರದರ್ಶನ ಮಾಡಿ, ವೈಭವಯುತವಾಗಿ ಪೂಜಾ ವಿಧಾನಗಳ ಆಚರಣೆ ಮಾಡಿದರೆ, ಅವನೇ ಸರ್ವಶ್ರೇಷ್ಟ ಭಕ್ತ ಎಂದು ಪರಿಭಾವಿಸುವುದು ತಪ್ಪಾಗುತ್ತದೆ. ಈ ಡಂಭಾಚಾರದ ಭಕ್ತಿಯ ಪ್ರದರ್ಶನವನ್ನು ನೋಡಿ ಹನ್ನೆರೆಡನೇ ಶತಮಾನದ ವಚನಕಾರ 'ಜೇಡರ ದಾಸಿಮಯ್ಯ' ತನ್ನ ವಚನದಲ್ಲಿ ಬರುಸೆಟಗನ ಭಕ್ತಿ ದಿಟವೆಂದು ನೆಚ್ಚಲು ಭೇಡ, ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಎಂದು ಆಡಂಬರದ ಭಕ್ತಿಯ ತೋರುವವರನ್ನು ಬೆಕ್ಕಿಗೆ ಹೋಲಿಸಿದ್ದಾರೆ. ಆದ್ದರಿಂದಲೇ, ನಾವು ನಮ್ಮ ಮನದಲ್ಲಿರುವ ದುಷ್ಪ ಅಲೋಚನೆಗಳನ್ನು, ದುರ್ಬದ್ದಿಯನ್ನು, ಕಿತ್ತು ಹಾಕಿ, ಕೆಲ ಕ್ಷಣ ನಿಶ್ಚಿಂತೆಯಿಂದ ಯಾವುದೇ ವಿಕಾರ ಭಾವನೆಗಳಿಗೆ ಒಳಗಾಗದೇ ಪ್ರಾಥರ್ಿಸಿ ಧ್ಯಾನ ಮಾಡಿದರೆ, ಖಂಡಿತ ನಿಮ್ಮ ಮನ ನೆಮ್ಮದಿಯ ಗೂಡಾಗುತ್ತದೆ.
ಪೂಜೆ ಮಾಡುವ ಮುನ್ನ, ನಾವು ಶುಚಿಭರ್ೂತರಾಗಿ, ಮಡಿವಸ್ತ್ರ ದರಿಸಿ ದೇವಸ್ಥಾನಕ್ಕೆ ಕಾಲಿಟ್ಟು ಪೂಜೆ ಮಾಡುವಾಗ, ನಮ್ಮ ಮನಸ್ಸು ಆ ದೇವಸ್ಥಾನದ ದೇವರಲ್ಲಿ ಇರದೇ ಅಕ್ಕ-ಪಕ್ಕ, ಹಿಂದೆ-ಮುಂದೆ ನೋಡುತ್ತಾ ಜಗತ್ತನ್ನೇ ಸುತ್ತಲು ಹೊರಡುತ್ತದೆ. ಮನಸ್ಸನ್ನು ಸ್ಥಿರತೆಯಲ್ಲಿ ಇಟ್ಟುಕೊಳ್ಳುವುದನ್ನು ಕಲಿಯದಿದ್ದರೆ, ನೀವು ಏನೇ ಪೂಜೆ ಮಾಡಿದರು, ಸಹ ನಮಗೆ ಬೇಕಾದ ಆ ಪೂಜಾ ಫಲ ಎಂದು ಸಿಗುವುದಿಲ್ಲ. ಅಂದರೆ ಸರಳವಾಗಿ ಹೇಳುವುದಾದರೆ ಒಬ್ಬ ವಿದ್ಯಾಥರ್ಿ ವರ್ಷವೀಡಿ ಅಲೆದು, ಪರೀಕ್ಷೆ ಹತ್ತಿರ ಬಂದಾಗ ಊರಿನ ಪ್ರಸಿದ್ಧ ದೇವಸ್ಥಾನಕ್ಕೆ ಹೋಗಿ ದೇವರೇ ನಾನು ಈ ಸಾರಿ ಪಾಸಗೂ ಹಾಗೇ ಮಾಡಿದರೇ 108 ಕಾಯಿ ಒಡಿತ್ತೀನಂತೆ ಹರಕೆ ಹೊತ್ತು ಪರೀಕ್ಷೆಯಲ್ಲಿ ಕಾಪಿ ಬರೆದು ಪಾಸಾಗಲಿಕ್ಕೆ ಪ್ರಯತ್ನಿಸುವ ವಿದ್ಯಾಥರ್ಿ, ಮಠದೊಳಗಿನ ಬೆಕ್ಕನ್ನು ನೆನಪಿಸುತ್ತಾನೆ. ಯಾರೇ ಇರಲಿ ಪೋಲಿ ಅಲೆದು ಬರುವ ಚಂಚಲ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಬರಿ ಪಾಸ ಮಾತ್ರ ಅಲ್ಲ, ರ್ಯಾಂಕ್ ಕೂಡ ಬರಬಹುದು. ನಾವು ಭಾವ ಪೂಜೆಯನ್ನು ದೇವರ ಪೂಜೆಗೆ ಮಾತ್ರ ಬಳಸಬಹುದು ಎಂಬುದನ್ನು ಬಿಟ್ಟು ಅದನ್ನು ಪ್ರತಿಯೊಂದು ಕಾರ್ಯದಲ್ಲಿ ಬಳಸಿದಲ್ಲಿ, ದಡ್ಡರಾಗಿರುವ ನಾವು ಮುಂದಿನ ದಿನಗಳಲ್ಲಿ ಪ್ರತಿಭಾನ್ವಿತರಾಗಬಹುದು.


- ಅಜಿತನಾಥ ಜೈನ್, ಹರಪನಹಳ್ಳಿ


No comments:

Post a Comment